ಬ್ರೇಕಿಂಗ್ ನ್ಯೂಸ್
21-09-23 11:46 am Bangalore Correspondent ಕರ್ನಾಟಕ
ಬೆಂಗಳೂರು, ಸೆ 21: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಯಥಾವತ್ತಾಗಿ ಪಾಲಿಸುವಂತೆ ಸುಪ್ರೀಂ ಕೋರ್ಟ್ ನ್ಯಾ. ಬಿ.ಆರ್. ಗವಾಯಿ ನೇತೃತ್ವದ ಮೂವರು ಸದಸ್ಯರ ಪೀಠದಿಂದ ಆದೇಶ ಹೊರಡಿಸಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಲಾಗಿತ್ತು. ನಾವು 2,500 ಕ್ಯೂಸೆಕ್ಸ್ ನೀರನ್ನು ಮಾತ್ರವೇ ಬಿಡುಗಡೆ ಮಾಡಲು ಸಾಧ್ಯವಿದೆ. ಕಳೆದ ಎರಡು ತಿಂಗಳಿನಿಂದ ಮಳೆ ಕೊರತೆ ಇದೆ. ಆದ್ದರಿಂದ ನೀರು ಬಿಡಲಾಗಲ್ಲ ಎಂದು ಕರ್ನಾಟಕದ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದ್ದರು.
ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ಇದೆ, ರೈತರು ಎಲ್ಲೆಡೆ ನೀರಿನ ಅಭಾವವಿದೆ. ನಮಗೆ ಕುಡಿಯವ ನೀರಿನ ಅಭಾವವಿದೆ ಆದ್ದರಿಂದ ತಮಿಳುನಾಡಿನ ಬೆಳೆಗಳಿಗೆ ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು. ಆದರೆ ತಮಿಳುನಾಡು ಪರ ಮುಕುಲ್ ರೋಹ್ಟಗಿ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಆದೇಶ ಪಾಲಿಸಬೇಕು ಎಂದು ಹೇಳಿದ್ದರು.
ತಮಿಳುನಾಡು ವಾದ ಏನಾಗಿತ್ತು?
ನೀರು ಹಂಚಿಕೆ ಬಗ್ಗೆ CWRC, CWMA ಸಭೆ ಮಾಡಿದ್ದು, ಪ್ರಾಧಿಕಾರ ನೀರು ಹರಿಸಲು ಸೂಚನೆ ನೀಡಿವೆ. ಆದರೆ ಕರ್ನಾಟಕ ಆದೇಶವನ್ನು ಪಾಲಿಸಿಲ್ಲ. ನಾವು ಬಹಳಷ್ಟು ಕಡಿಮೆ ನೀರು ಪಡೆಯುತ್ತಿದ್ದೇವೆ. CWMA ಆದೇಶಿಸಿದಷ್ಟು ನೀರು ಬಿಡುಗಡೆ ಮಾಡ್ತಿಲ್ಲ. ಕರ್ನಾಟಕ ಪ್ರತಿದಿನ 1200 ಕ್ಯೂ. ನೀರು ಬಿಡ್ತಿದೆ. ಇದು ಯಾವ ನ್ಯಾಯ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದರು.
ನಮಗೆ ಪ್ರತಿದಿನ 6,400 ಕ್ಯೂಸೆಕ್ ನೀರು ಬಿಡಬೇಕು. ನಮಗೆ CWMA ಆದೇಶದ ಬಗ್ಗೆ ತಕರಾರು ಇದೆ. ಮಳೆ ಇಲ್ಲ ಎಂಬ ಅರಿವಿದೆ, ಆದರೆ ನಮ್ಮ ಪಾಲಿನ ನೀರು ಕೇಳ್ತಿದ್ದೇವೆ. ಮಳೆ ಕಡಿಮೆ, ನೀರಿನ ಮಟ್ಟ ಇಳಿಕೆ ಬಗ್ಗೆ ಗೊತ್ತಿದೆ. ವರದಿ ಆಧರಿಸಿಯೇ CWMA ಆದೇಶ ನೀಡಿದೆ ಎಂದು ರೋಹ್ಟಗಿ ತಮ್ಮ ವಾದದಲ್ಲಿ ಹೇಳಿದರು.
ಕಡಿಮೆ ನೀರು ಬಿಡುಗಡೆಗೆ ಆದೇಶಿಸಿದ್ರೂ ಪಾಲಿಸ್ತಿಲ್ಲ. ಅಗತ್ಯ ಇರೋದು 7,200 ಕ್ಯೂಸೆಕ ನೀರು. ಆದ್ರೆ ಇದು ಶೇ.25ಕ್ಕೆ ಇಳಿಕೆಯಾಗಿದೆ. ಕರ್ನಾಟಕ 1000-2000 ಕ್ಯೂ ಬಿಡುತ್ತೇವೆ ಎಂದು ಹೇಳುತ್ತವೆ. ನಾವು 10 ಸಾವಿರದಿಂದ 12 ಸಾವಿರ ಕ್ಯೂ. ಕೇಳುತ್ತಿದ್ದೇವೆ. ಪ್ರಾಧಿಕಾರ ಕೇಳಿದ್ದಕ್ಕಿತ 7,200 ಕ್ಯೂಸೆಕ್ ಕಡಿಮೆ ಮಾಡಿದೆ. ಈಗ ದಿನಕ್ಕೆ 7,200 ಕ್ಯೂಸೆಕ್ ಆದ್ರೂ ಬಿಡಬೇಕು. ಇದಕ್ಕಿಂತ ಶೇ.25ರಷ್ಟು ಕಡಿಮೆ ಮಾಡಬಾರದು ಎಂದು ಮುಕುಲ್ ರೋಹ್ಟಗಿ ಮನವಿ ಮಾಡಿಕೊಂಡರು.
ಕರ್ನಾಟಕ ವಾದ ಏನಾಗಿತ್ತು?
ಕರ್ನಾಟಕದಲ್ಲಿ ನೀರಿನ ಸಮಸ್ಯೆಯಿದೆ. ನಾವು CWMA ಹೇಳಿದಂತೆ ನೀರು ಹರಿಸಿದ್ದೇವೆ. ಕರ್ನಾಟಕದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸಂಕಷ್ಟದಲ್ಲಿ ತಮಿಳುನಾಡಿಗೆ ನೀರು ಬಿಡಿ ಅಂದ್ರೆ ಹೇಗೆ? ತಮಿಳುನಾಡಿಗೆ ನಿತ್ಯ 12,500 ಕ್ಯೂ. ನೀರು ಬಿಡಬೇಕು. ನಾವು ಹೆಚ್ಚುವರಿ ನೀರು ಹರಿಸಿದ್ದೇವೆ ಎಂದು ಕರ್ನಾಟಕದ ಪರ ಶ್ಯಾಮ್ ದಿವಾನ್ ವಾದ ಮಂಡಿಸಿದ್ದರು.
Cauvery Water, Supreme court orders to release 5000 units of water to Tamilnadu.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 01:23 pm
HK News Desk
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm